ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ ವರ್ಗದ ವರ್ಗಾವಣೆಗೆ ಅರ್ಹ ಪ್ರಾಧ್ಯಾಪಕರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸರಕಾರಿ ಇಂಜಿನಿಯರಿಂಗ್, ಪದವಿ ಕಾಲೇಜುಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗೆ ಒಳಪಡಲಿರುವ ಬೋಧಕರು, ಗ್ರಂಥಪಾಲಕರು, ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು, ಸರಕಾರಿ ಪಾಲಿಟೆಕ್ನಿಕ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗೆ ಒಳಪಡಲಿರುವ ಉಪನ್ಯಾಸಕರ ಉಳಿದ ಮೂಲ ವೃಂದದ ವಲಯವಾರು ಪಟ್ಟಿ, ವಿಶೇಷ ಪ್ರಕರಣಗಳಡಿ ವರ್ಗಾವಣೆಯ ಕಾಯ್ದಿರಿಸಿದ ಬೋಧಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ವರ್ಗಾವಣಾ ತಾತ್ಕಾಲಿಕ ಆದ್ಯತಾ ಪಟ್ಟಿಯಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ, ಜು.23 ರೊಳಗೆ dtetransfer21@gmail.com ಈ ವಿಳಾಸಕ್ಕೆ ಇ- ಮೇಲ್ ಮಾಡಬಹುದಾಗಿದೆ.
ಭೌತಿಕವಾಗಿ ಸಲ್ಲಿಸುವ ಮತ್ತು ಕೊನೆ ದಿನಾಂಕದ ನಂತರ ಸಲ್ಲಿಸುವ, ಅಪೂರ್ಣ ಮಾಹಿತಿಯ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.













Got a Questions?
Find us on Socials or Contact Us and we’ll get back to you as soon as possible.