ರೈಲ್ವೆ ಜಾಬ್ ಯಾಕೆ ಬೆಸ್ಟ್? ರೈಲ್ವೆಯು ನೀಡುವ ಸೌಲಭ್ಯಗಳೇನು?

ಎಲ್ಲರಿಗೂ ರೈಲ್ವೆ ಜಾಬ್ ಯಾಕೆ ಅಚ್ಚುಮೆಚ್ಚು ಗೊತ್ತೆ? ಭಾರತದ ಅತ್ಯುತ್ತಮ ಉದ್ಯೋಗದಾತ ಸಂಸ್ಥೆಯಲ್ಲಿ ಉದ್ಯೋಗಿಯಾದರೆ ದೊರಕುವ ಪ್ರಯೋಜನಗಳೇನು ಗೊತ್ತೆ?

ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ರೈಲ್ವೆ ಉದ್ಯೋಗವು ಎಲ್ಲರಿಗೂ ಅಚ್ಚುಮೆಚ್ಚು. 7ನೇ ತರಗತಿ ಓದಿದವರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್… ಎಲ್ಲಾ ಓದಿದವರಿಗೂ ಭಾರತದ ರೈಲ್ವೆಯಲ್ಲಿ ಅವಕಾಶವಿದೆ. ಕೆಲವೊಮ್ಮೆ ತಮ್ಮ ವಿದ್ಯಾರ್ಹತೆಗೆ ಸರಿ ಹೊಂದದೆ ಇದ್ದರೂ ಕೆಲವರು ರೈಲ್ವೆಯ ಕೆಳದರ್ಜೆಯ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲ್ವೆಯಲ್ಲಿ ಕೆಲಸ ಸಿಕ್ಕರೆ ಏನೆಲ್ಲ ಪ್ರಯೋಜನಗಳಿವೆ? ಯಾಕೆ ಎಲ್ಲರಿಗೂ ರೈಲ್ವೆ ಜಾಬ್ ಅಂದ್ರೆ ಅಷ್ಟು ಮೋಹ? ಇಲ್ಲಿದೆ ಉತ್ತರ.

ಅತ್ಯುತ್ತಮ ವೇತನ

ತನ್ನ ಉದ್ಯೋಗಿಗಳಿಗೆ ಭಾರತೀಯ ರೈಲ್ವೆಯು ಕೈತುಂಬಾ ವೇತನ ನೀಡುತ್ತದೆ. ಬೇಸಿಕ್ ಪೇ ಜೊತೆಗೆ, ಗ್ರೇಡ್ ಪೇ, ಡಿಯರ್ನೆಸ್ ಅಲೋವೆನ್ಸ್, ಪ್ರಯಾಣ `Àತ್ತೆ, ಮನೆ ಬಾಡಿಗೆ, ವೈದ್ಯಕೀಯ ಮೊತ್ತ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ತನ್ನ ವೇತನದ ಜೊತೆ ನೀಡುತ್ತದೆ. ಈಗಂತೂ 7ನೇ ವೇತನ ಆಯೋಗದ ಅನ್ವಯ ವೇತನ ದೊರಕುತ್ತದೆ. ಹೀಗಾಗಿ, ಗ್ರೂಪ್-ಡಿ ಹುದ್ದೆಯಲ್ಲಿದ್ದವರೂ 21 ಸಾವಿರ ರೂ.ಗಿಂತ ಹೆಚ್ಚು ವೇತನವನ್ನು ತಿಂಗಳಿಗೆ ಪಡೆಯುತ್ತಾರೆ.

ರೈಲ್ವೆ ಕ್ವಾರ್ಟರ್ಸ್

ತನ್ನ ಉದ್ಯೋಗಿಗಳಿಗೆ ರೈಲ್ವೆಯು ಕ್ವಾರ್ಟರ್ಸ್‍ಗಳನ್ನು ನೀಡುತ್ತಿದೆ. ಹೀಗಾಗಿ, ರೈಲ್ವೆ ಉದ್ಯೋಗ ಸಿಕ್ಕಾಗ ಮನೆ ಬಾಡಿಗೆ ಇತ್ಯಾದಿಗಳಿಗೆ ಕಷ್ಟಪಡಬೇಕಿಲ್ಲ. ರೈಲ್ವೆ ಕಾಲೋನಿಗಳಲ್ಲಿ ಉಳಿದುಕೊಳ್ಳಬಹುದು. ಈ ರೈಲ್ವೆ ಕಾಲೋನಿಯಲ್ಲಿ ಸಾಮಾನ್ಯ ಸೌಲಭ್ಯಗಳು ಇರುತ್ತವೆ.

ಸಬ್ಸಿಡಿ ಆಹಾರ

ಉಚಿತ ಆಹಾರ ಅಥವಾ ಸಬ್ಸಿಡಿ ಇರುವ ಆಹಾರವು ರೈಲ್ವೆ ಉದ್ಯೋಗಿಗಳಿಗೆ ದೊರಕುತ್ತದೆ. ಇದರಿಂದ ರೈಲ್ವೆ ಉದ್ಯೋಗಿಗಳು ಸಾಕಷ್ಟು ಹಣ ಉಳಿಸಬಹುದು. ದೇಶಾದ್ಯಂತ ಇರುವ ರೈಲ್ವೆ ಕ್ಯಾಂಟಿನ್‍ಗಳಲ್ಲಿ ರೈಲ್ವೆ ಉದ್ಯೋಗಿಗಳು ಕಡಿಮೆ ಮೊತ್ತಕ್ಕೆ ಊಟ, ತಿಂಡಿ ಮಾಡಬಹುದಾಗಿದೆ.

ಅವಕಾಶಗಳು

ರೈಲ್ವೆಯು ಬೃಹತ್ ಸಂಸ್ಥೆಯಾಗಿರುವುದರಿಂದ ಪ್ರಮೋಷನ್‍ಗೆ, ಹೊಸ ಕೌಶಲ ಕಲಿತು ಮೇಲ್ದರ್ಜೆಗೆ ಏರಲು ಉತ್ತಮ ಅವಕಾಶವಿದೆ. ರೈಲ್ವೆ ಕ್ಷೇತ್ರದಲ್ಲಿ ಎಲ್ಲಾ ಬಗೆಯ ಉದ್ಯೋಗಾವಕಾಶಗಳಿವೆ. ರಿಸರ್ಚ್‍ನಿಂದ ವ್ಯವಸ್ಥಾಪಕ ಕೌಶಲ ಇರುವ ಎಲ್ಲರಿಗೂ ಇಲ್ಲಿ ಅವಕಾಶ ದೊರಕುತ್ತದೆ.

ಪೆನ್ಷನ್ ಸಿಗುತ್ತೆ!

ಬಹುತೇಕ ಸರಕಾರಿ ಉದ್ಯೋಗಗಳಂತೆ ಭಾರತೀಯ ರೈಲ್ವೆಯು ತನ್ನ ಉದ್ಯೋಗಿಗಳಿಗೆ ಪೆನ್ಷನ್ ನೀಡುತ್ತದೆ. ಹೀಗಾಗಿ, ಜೀವನಪೂರ್ತಿ `Àದ್ರತೆಗೆ ಕೊರತೆಯಿಲ್ಲ. ರೈಲ್ವೆ ಉದ್ಯೋಗಿಯು ಮೃತನಾದ ನಂತರವೂ ಆ ಉದ್ಯೋಗಿಯ ಕುಟುಂಬಕ್ಕೆ ಪರಿಹಾರ/ಉದ್ಯೋಗ ಇತ್ಯಾದಿಗಳನ್ನು ಪಡೆಯುವ ಅವಕಾಶವನ್ನು ಭಾರತೀಯ ರೈಲ್ವೆಯು ನೀಡುತ್ತದೆ.

ಕೆಲಸದ `Àದ್ರತೆ

ಭಾರತೀಯ ರೈಲ್ವೆಯಲ್ಲಿ ಕೆಲಸ ಸಿಕ್ಕರೆ ಅದು ಜೀವನಕ್ಕೆ ಅತ್ಯುತ್ತಮ `Àದ್ರತೆಯಾಗಿದೆ. ಉದ್ಯೋಗಿಯು ರೈಲ್ವೆಯ ನಿಯಮಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದರೆ ಜೀವನಪೂರ್ತಿ ಕೆಲಸದಿಂದ ತೆಗೆದುಹಾಕುವ ಭೀತಿ ಇಲ್ಲದೆ ನಿಶ್ಚಿಂತೆಯಿಂದ ಕಾರ್ಯನಿರ್ವಹಿಸಬಹುದು. ಖಾಸಗಿ ಕಂಪನಿಗಳಂತೆ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಪಿಂಕ್ ಸ್ಲಿಪ್ ಪಡೆಯುವ ಆತಂಕ ರೈಲ್ವೆ ಉದ್ಯೋಗದಲ್ಲಿ ಇಲ್ಲ.

ಕೆಲಸದ ವಾತಾವರಣ

ರೈಲ್ವೆಯಲ್ಲಿ ಕೆಲಸ ಕಷ್ಟ ಇರಬಹುದು. ಮೇಲಾýಕಾರಿಗಳ ಕಿರಿಕಿರಿಯೂ ಇರಬಹುದು. ಆದರೂ, ಕೆಲಸದ ವಾತಾವರಣದಲ್ಲಿ Áರತೀಯ ರೈಲ್ವೆಯೂ ಈಗಲೂ ಅತ್ಯುತ್ತಮ ಆಯ್ಕೆಯಾಗಿ ಉಳಿದಿದೆ. ಒಮ್ಮೆ ಕೆಲಸಕ್ಕೆ ಸೇರಿದ ಮೇಲೆ ಅರ್Àದಲ್ಲಿ ಕೆಲಸ ಬಿಡುವವರ ಪ್ರಮಾಣ ರೈಲ್ವೆಯಲ್ಲಿ ತೀರಾ ಕಡಿಮೆಯಾಗಿದೆ.

ಇದನ್ನೂ ಓದಿ  ವೈಮಾನಿಕ ಎಂಜಿನಿಯರಿಂಗ್: ಶಿಕ್ಷಣ ಮತ್ತು ಕರಿಯರ್ ಹೇಗೆ?

ಶಾಲೆಗಳು ಮತ್ತು ಕಾಲೇಜುಗಳು

ರೈಲ್ವೆ ಕಾಲೋನಿಗಳಲ್ಲಿ ವಾಸಿಸುವವರಿಗೆ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳೂ ಸುಲ`Àವವಾಗಿ ದೊರಕುತ್ತವೆ.

ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ

ರೈಲ್ವೆ ಉದ್ಯೋಗಿಗಳು ಮತ್ತು ಅವರ ಕುಟುಂಬಕ್ಕೆ ರೈಲ್ವೆಯ ಆಸ್ಪತ್ರೆಗಳಲ್ಲಿ ಉಚಿತವಾಗಿ ವೈದ್ಯಕೀಯ ಸೇವೆ ದೊರಕುತ್ತದೆ. ರೈಲ್ವೆ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ದೊರಕುತ್ತದೆ. ಎಲ್ಲಾದರೂ ರೈಲ್ವೆ ಆಸ್ಪತ್ರೆಯಲ್ಲಿ ದೊರಕದೆ ಇರುವ ಚಿಕಿತ್ಸೆಗೆ, ಹೊರಗಡೆ ಚಿಕಿತ್ಸೆ ಪಡೆದರೆ ಅದನ್ನೂ ರೈಲ್ವೆ ಇಲಾಖೆಯೇ ಪಾವತಿಸುತ್ತದೆ.

ಸಂಬಂýಗಳಿಗೆ ಉದ್ಯೋಗ

ಎಲ್ಲಾದರೂ ರೈಲ್ವೆ ಉದ್ಯೋಗಿಯು ಸೇವೆಯಲ್ಲಿ ಇದ್ದಾಗ ಮೃತಪಟ್ಟರೆ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆÁರದಲ್ಲಿ ಕೆಲಸ ದೊರಕುತ್ತದೆ. ಆಕಸ್ಮಿಕವಾಗಿ ಕುಟುಂಬದ ಆÁರ ಸ್ತಂ`Àವೇ ಬಿದ್ದುಹೋದಾಗ ಕುಟುಂಬ ಹಣಕಾಸು ಬಿಕ್ಕಟ್ಟಿಗೆ ಈಡಾಗುವುದನ್ನು ಇದು ತಪ್ಪಿಸುತ್ತದೆ.

ತರಬೇತಿ

`Áರತೀಯ ರೈಲ್ವೆಯು ತನ್ನ 3.2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಮತ್ತು ಸಾವಿರಾರು ಆಫೀಸರ್‍ಗಳಿಗೆ ಪ್ರತಿವರ್ಷವೂ ತರಬೇತಿ ನೀಡುತ್ತದೆ. ಆಯಾ ಹುದ್ದೆಗೆ ತಕ್ಕಂತೆ ಸಿಬ್ಬಂದಿಗಳನ್ನು ದೇಶದ ಅಥವಾ ವಿದೇಶದ ಶಿಕ್ಷಣ ಸಂಸ್ಥೆಗಳಿಗೆ ತರಬೇತಿಗೆ ರೈಲ್ವೆಯು ಕಳುಹಿಸುತ್ತದೆ.

ಸ್ಟಡಿ ಲೀವ್

ಭಾರತೀಯ ರೈಲ್ವೆಯು ಕೇವಲ ತನ್ನ ಸಂಸ್ಥೆಗೆ ಸಂಬಂ`Àಪಟ್ಟಂತೆ ತರಬೇತಿಗೆ ಮಾತ್ರ ಹಣ ಹೂಡಿಕೆ ಮಾಡುವುದಲ್ಲ. ಎಲ್ಲಾದರೂ ರೈಲ್ವೆ ಉದ್ಯೋಗಿಯು ಉನ್ನತ ಶಿಕ್ಷಣ ಪಡೆಯಲು ಬಯಸಿದರೆ ರೈಲ್ವೆ ಇಲಾಖೆಯು ತನ್ನ ಸ್ವಂತ ಖರ್ಚಿನಲ್ಲಿ ಉದ್ಯೋಗಿಯ ವಿದ್ಯಾರ್ಜನೆಗೆ ನೆರವು ನೀಡುತ್ತದೆ.

ಕ್ರೀಡೆ ಮತ್ತು ಫಿಟ್‍ನೆಸ್

ನೀವು ಕ್ರೀಡಾಪಟುವಾಗಿದ್ದು, ಯಾವುದಾದರೂ ಆಟದಲ್ಲಿ ಪರಿಣತಿ ಪಡೆದಿದ್ದರೆ, ಕ್ರೀಡಾ ಕ್ಷೇತ್ರದಲ್ಲಿ ಸಾÀನೆ ಮಾಡಿದ್ದರೆ ರೈಲ್ವೆ ಸಿಬ್ಬಂದಿಗಳಿಗೆ ತರಬೇತಿ ನೀಡಬಹುದು ಅಥವಾ ರೈಲ್ವೆ ತಂಡದಲ್ಲಿದ್ದುಕೊಂಡು ಕ್ರಿಕೆಟ್, ಹಾಕಿ, ಬ್ಯಾಂಡ್ಮಿಟನ್ ಇತ್ಯಾದಿ ಪಂದ್ಯಗಳಲ್ಲಿÁಗವಹಿಸಬಹುದು.

ಉಚಿತ ಪ್ರವಾಸ

ರೈಲ್ವೆ ಉದ್ಯೋಗಿಗಳು ಮತ್ತು ಅವರ ಕುಟುಂಬಕ್ಕೆ ಉಚಿತ ರೈಲ್ವೆ ಪ್ರಯಾಣದ ಪಾಸ್‍ಗಳು ದೊರಕುತ್ತವೆ. ಹೀಗಾಗಿ ತಮ್ಮ ಕುಟುಂಬದ ಜೊತೆ ಪ್ರವಾಸ ಯೋಜನೆ ಕೈಗೊಳ್ಳಬಹುದು.

ಹಿಂಜರಿತದ `Àಯವಿಲ್ಲ

ಆರ್ಥಿಕ ಹಿಂಜರಿತದ ಸಮಯದಲ್ಲಿ ವೇತನ ಕಡಿತವಾಗುವ `Àಯಬೇಕಿಲ್ಲ. ಈ ವರ್ಷ ಎಷ್ಟು ಇನ್‍ಕ್ರಿಮೆಂಟ್ ಕಡಿಮೆ ಕೊಡಬಹುದೇನೋ ಎಂಬ ಚಿಂತೆಯಲ್ಲಿ ಇರಬೇಕಿಲ್ಲ.
ಒಟ್ಟಾರೆ, ಭಾರತೀಯ ರೈಲ್ವೆಯು ದೇಶದ ಅತ್ಯುತ್ತಮ ಉದ್ಯೋಗದಾತ ಸಂಸ್ಥೆಯಾಗಿ ಹೆಸರುಗಳಿಸಿದೆ.