ದ್ವಿತೀಯ ಪಿಯುಸಿ ( 12 ನೇ ತರಗತಿ) ವಿದ್ಯಾರ್ಥಿಗಳಿಗೆ ಈ ಬಾರಿ ಗ್ರೇಡ್ ಹೇಗೆ ನೀಡಲಾಗುತ್ತದೆ, ಮೌಲ್ಯಮಾಪನ ಮಾನದಂಡ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಸಮಿತಿ ಅಂತಿಮ ವರದಿಯನ್ನು ಸುಪ್ರೀಯ ಕೋರ್ಟ್ ಮುಂದೆ ಮಂಡಿಸಿದೆ.
11 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 30 ರಷ್ಟು ಅಂಕ, ಶೇಕಡಾ 30 ರಷ್ಟು ಅಂಕಗಳನ್ನು 10 ನೇ ತರಗತಿಯ ಮೂರು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಅದರಿಂದ ಸೇರಿಸಿ ಹಾಗೂ ಉಳಿದ ಶೇಕಡಾ 40 ನ್ನು 12 ನೇ ತರಗತಿಯ ಈ ಹಿಂದಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಅಂಕಗಳನ್ನು ಆಧರಿಸಿ ಫಲಿತಾಂಶ ನೀಡಲಾಗುತ್ತದೆ.
ವಿದ್ಯಾರ್ಥಿಗಳ ಮೂರು ವರ್ಷಗಳ ಅಂಕಗಳನ್ನು ತೆಗೆದುಕೊಂಡು ಅರ್ಹತಾ ಮಾನದಂಡ ಪೂರೈಸದಿದ್ದರೆ, ಇದನ್ನು ಅಗತ್ಯ ಪುನರಾವರ್ತನೆ ಅಥವಾ ವರ್ಗ ವಿಭಾಗವೆಂದು ಪರಿಗಣಿಸಲಾಗುವುದು. ವಿದ್ಯಾರ್ಥಿಗಳು ಅರ್ಹ ಮಾನದಂಡವನ್ನು ಹೊಂದಿರದಿದ್ದರೆ ಮುಂದಿನ ದಿನಗಳಲ್ಲಿ ಸಿಬಿಎಸ್ ಇ ನಡೆಸುವ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಮತ್ತೆ ತೆಗೆದುಕೊಳ್ಳಬಹುದು ಎಂದು ಸಿಬಿಎಸ್ ಇ ಪರ ಅಟೊರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದ್ದಾರೆ.
ಈಗ ಇರುವ ಕಾರ್ಯವಿಧಾನದಿಂದ ಅಂಕಗಳು/ಶ್ರೇಣೀಕರಣದಿಂದ ತೃಪ್ತರಾಗದ ವಿದ್ಯಾರ್ಥಿಗಳು ಮುಂದೆ ನಡೆಯುವ ಭೌತಿಕ ಪರೀಕ್ಷೆಗಳ ಮೂಲಕ ತಮ್ಮ ಅಂಕಗಳನ್ನು ಸುಧಾರಿಸಬಹುದು. ಕೋವಿಡ್ ತಿಳಿಗೊಂಡ ನಂತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಜುಲೈ 31 ರ ಹೊತ್ತಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದರು.













Got a Questions?
Find us on Socials or Contact Us and we’ll get back to you as soon as possible.