ಸಿಬಿಎಸ್ ಇ 12 ನೇ ತರಗತಿ ಫಲಿತಾಂಶ: ಈ ಬಾರಿಯೂ ಬಾಲಕಿಯರೇ ಮೇಲುಗೈ

ಸಿಬಿಎಸ್ ಇ( ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ಕೊರೊನಾ ಕಾರಣದಿಂದ ಪರೀಕ್ಷೆ ನಡೆದಿರಲಿಲ್ಲ. 30:30:40 ಅನುಪಾತದ ಅನುಸಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. 10 ನೇ ಮತ್ತು 11 ನೇ ತರಗತಿ ಅಂತಿಮ ಪರೀಕ್ಷೆ ಹಾಗೂ 12 ನೇ ತರಗತಿಯಲ್ಲಿ ನಡೆಸಿದ ಪೂರ್ವ ಸಿದ್ಧತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಪರೀಕ್ಷೆಗೆ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಪೈಕಿ ಶೇ.99.37 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಶೇ.99.67 ತೇರ್ಗಡೆ ಪ್ರಮಾಣ ಹೊಂದಿದ್ದರೆ, ಶೇ.99.13 ರಷ್ಟು ಬಾಲಕರು ತೇರ್ಗಡೆ ಪ್ರಮಾಣ ಹೊಂದಿದ್ದಾರೆ.

ಬಾಲಕಿಯರು ಈ ಬಾರಿ ಕೂಡಾ ಬಾಲಕರಿಗಿಂತ ಶೇ. 0.54 ರಷ್ಟು ಮೇಲುಗೈ ಸಾಧಿಸಿದ್ದಾರೆ.

6,149 ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದ್ದು, ಇವರು ಪರೀಕ್ಷೆ ಎದುರಿಸಬೇಕಾಗುತ್ತದೆ.

ಹೊಸ ಮಾನದಂಡದ ಅಡಿಯಲ್ಲಿ ಪ್ರಕಟವಾದ ಫಲಿತಾಂಶ ತೃಪ್ತಿಯಾಗದಿದ್ದರೆ ಅವರು ನೇರವಾಗಿ ಪರೀಕ್ಷೆ ಬರೆಯಲು ಅವಕಾಶವಿದೆ.

error: Content is protected !!