ಕ್ರಿಮಿನಾಲಜಿ ಕಲಿಯಿರಿ, ಕ್ರಿಮಿನಲ್ ಗಳನ್ನು ಹಿಡಿಯಿರಿ

By | 01/03/2020
Criminlogy Course Guide in Kannada

ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಇದರಿಂದ ಕ್ರಿಮಿನಾಲಜಿ ಓದಿರುವವರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಕ್ರಿಮಿನಾಲಜಿ ಕ್ಷೇತ್ರವು ಸವಾಲಿನಿಂದ ಕೂಡಿದ್ದು, ಆಸಕ್ತಿದಾಯಕ ಉದ್ಯೋಗವೂ ಹೌದು. ಕ್ರಿಮಿನಾಲಜಿ ಎನ್ನುವುದು ವಿಜ್ಞಾನದ ಒಂದು ಶಾಖೆಯಾಗಿದ್ದು ಅಪರಾಧಗಳ ಪತ್ತೆ ಮತ್ತು ಅಪರಾಧಗಳ ತಡೆಗಟ್ಟುವಿಕೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಫೋರೆನ್ಸಿಕ್ ಸೈನ್ಸ್ ಬಗ್ಗೆ ಗೊತ್ತಿರಬಹುದು. ಇದು ಕ್ರಿಮಿನಾಲಜಿಯ ಒಂದು ಭಾಗವಷ್ಟೇ.

ಎಸ್‌ ಎಸ್‌ ಎಲ್‌ ಸಿ/ ಪಿಯುಸಿ ಬಳಿಕ ಮುಂದೇನು ಎಂದು ಕೋರ್ಸ್‌ಗಳ ಹುಡುಕಾಟದಲ್ಲಿರುವವರಿಗೆ ಕ್ರಿಮಿನಾಲಜಿ ಅತ್ಯುತ್ತಮ ಆಯ್ಕೆಯಾಗಬಲ್ಲದು

ಕ್ರಿಮಿನಾಲಜಿ ಎನ್ನುವುದು ಸಾಕ್ಷ್ಯಾಧಾರಗಳ ವಿಜ್ಞಾನ, ಅಪರಾಧ ನಡೆದ ಸ್ಥಳದಲ್ಲಿ ದೊರಕುವ ರಕ್ತ, ಕೂದಲು, ಎಂಜಲು, ದೇಹದ ದ್ರವಗಳು, ಫಿಂಗರ್‌ ಪ್ರಿಂಟ್, ಕೆಮಿಸ್ಟ್ರಿ, ವಂಶವಾಹಿ ಗುರುತುಗಳು ಇತ್ಯಾದಿಗಳನ್ನು ವಿಶ್ಲೇಷಣೆ ಮಾಡಿ ಅಪರಾಧಗಳನ್ನು ಪತ್ತೆಹಚ್ಚಲಾಗುತ್ತದೆ ಕ್ರಿಮಿನಾಲಜಿ ಎನ್ನುವುದು ವೈಯಕ್ತಿಕ ಅಥವಾ ಸಾಮಾಜಿಕ ಅಪರಾಧದ ಅಧ್ಯಯನವಾಗಿದೆ. ಪ್ರಕರಣವೊಂದರ ಹಿನ್ನಲೆ, ಅಪರಾಧಕ್ಕೆ ಕಾರಣ, ಅಪರಾಧದ ಅಂಕಿಅಂಶಗಳು, ಅಪರಾಧಗಳ ತಡೆ, ಅಪರಾಧಗಳ ವರ್ತನೆ ಇತ್ಯಾದಿಗಳನ್ನು ಕ್ರಿಮಿನಾಲಜಿ ಅಧ್ಯಯನ ಮಾಡುತ್ತದೆ.

“ಶಿಕ್ಷೆ ಇರುವುದು ಸೇಡು ತೀರಿಸಿಕೊಳ್ಳಲು ಅಲ್ಲ. ಅಪರಾಧವನ್ನು ಕಡಿಮೆ ಮಾಡಲು ಮತ್ತು ಅಪರಾಧಿಯನ್ನು ಸರಿದಾರಿಗೆ ತರುವ ಕಾರಣಕ್ಕಾಗಿ”-

ಎಲಿಜಬೆತ್ ಫ್ರೈ

ಈ ಕ್ಷೇತ್ರದ ಕುರಿತು ನಿಮಗೆ ಆಸಕ್ತಿಯಿದ್ದರೆ ಈ ಮುಂದಿನ ಕೋರ್ಸ್‍ಗಳಲ್ಲಿ ಯಾವುದಾದರೂ ಒಂದನ್ನು ಮಾಡಬಹುದು.

1. ಸರ್ಟಿಫಿಕೇಷನ್ ಕೋರ್ಸ್ (ಫೋರೆನ್ಸಿಕ್ ಸೈನ್ಸ್).

2. ಡಿಪ್ಲೊಮಾ ಕೋರ್ಸ್ (ಸೈಬರ್ ಕ್ರೈಮ್)

3. ಡಿಪ್ಲೊಮಾ ಕೋರ್ಸ್ ( ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ).

4. ಡಿಪ್ಲೋಮಾ ಇನ್ ಕ್ರಿಮಿನಲ್ ಲಾ (ಡಿ.ಕ್ರಿನ್).

5. ಡಿಪ್ಲೊಮಾ ಇನ್ ಕ್ರಿಮಿನಾಲಜಿ ಮತ್ತು ಪೆನೊಲಜಿ

6. ಬ್ಯಾಚುಲರ್ ಡಿಗ್ರಿ ಕೋರ್ಸ್ ( ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ).

7.ಸ್ನಾತಕೋತ್ತರ ಪದವಿ ( ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ).

8.ಸ್ನಾತಕೋತ್ತರ ಪದವಿ ( ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ ರಿಸರ್ಚ್).

9. ಕ್ರಿಮಿನಾಲಜಿ ಮಾಸ್ಟರ್ ಡಿಗ್ರಿ(ಎಂಎಸ್ಸಿ).

10. ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಜಸ್ಟಿಸ್ ಎಂಎ.

11.ಆ್ಯಂಟಿ ಟೆರರಿಸಂ ಲಾ (ಎಂಎ ಸ್ನಾತಕೋತ್ತರ).

12. ಕ್ರಿಮಿನಲ್ ಲಾ ಮತ್ತು ಕ್ರಿಮಿನಾಲಜಿ(ಎಲ್‍ಎಲ್‍ಎಂ).

13. ಕ್ರೈಮ್ಸ್ ಮತ್ತು ಟೋಟ್ರ್ಸ್ (ಎಲ್‍ಎಲ್‍ಎಂ).

14. ಕ್ರಿಮಿನಲ್ ಲಾ(ಎಲ್‍ಎಲ್‍ಎಂ). ‌

15. ಪೋಸ್ಟ್ ಗ್ರಾಜುವೇಟ್ ಡಿಪ್ಲೊಮಾ ಕೋರ್ಸ್ (ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ).

ಪಿಯುಸಿಯಲ್ಲಿ ವಿಜ್ಞಾನ ಓದಿರುವವರು ಕ್ರಿಮಿನಾಲಜಿ ಕೋರ್ಸ್‍ಗಳಿಗೆ ದಾಖಲಾತಿ ಪಡೆಯಬಹುದು. ಬಿಎ ಪದವಿ ಪ್ರೋಗ್ರಾಮ್‌ಗಳಿಗೆ ಪಿಯುಸಿಯಲ್ಲಿ ಆರ್ಟ್ಸ್ ಓದಿರುವವರೂ ಸೇರಬಹುದಾಗಿದೆ. ಕ್ರಿಮಿನಾಲಜಿ ಸಂಬಂಧಪಟ್ಟ ಎಂಎ ಅಥವಾ ಎಲ್‍ಎಲ್‍ಎಂ ಕೋರ್ಸ್‍ಗಳಿಗೆ ಆಯಾ ವಿಷಯದಲ್ಲಿ ಪದವಿ ಪಡೆದವರು ಸೇರಬಹುದಾಗಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕ್ರಿಮಿನಾಲಜಿಯನ್ನು ಒಂದು ವಿಷಯವಾಗಿಯೂ ಕಲಿಯಬಹುದಾಗಿದೆ. ಸರ್ಟಿಫಿಕೇಷನ್ ಕೋರ್ಸ್‍ಗಳ ಅವಧಿ ಸಾಮಾನ್ಯವಾಗಿ 6 ತಿಂಗಳು ಇರುತ್ತದೆ. ಕೆಲವು ವಿಶ್ವವಿದ್ಯಾಲಯಗಳು 1 ವರ್ಷದ ಸರ್ಟಿಫಿಕೇಷನ್ ಸಹ ನೀಡುತ್ತವೆ.

ಬಹುತೇಕ ಕಾಲೇಜುಗಳಲ್ಲಿ ಕ್ರಿಮಿನಾಲಜಿಗೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಕಲಿಸಲಾಗುತ್ತದೆ. ನೀವು ನಿಮ್ಮ ಹತ್ತಿರದ ಕಾಲೇಜಿನಲ್ಲಿ ಈ ಕುರಿತು ವಿಚಾರಿಸಬಹುದು. ‌

ಈ ಕೋರ್ಸ್‍ಗಳು ಲಭ್ಯವಿರುವ ಕೆಲವು ಶಿಕ್ಷಣ ಸಂಸ್ಥೆಗಳ ಹೆಸರು ಇಂತಿದೆ:

  • ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್‍ಸ್ಟಿಟ್ಯೂಟ್.
  • ಕಸ್ತೂರಿಬಾ ಮೆಡಿಕಲ್ ಕಾಲೇಜು, ಮಣಿಪಾಲ.
  • ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಬೆಂಗಳೂರು.
  • ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜು, ಬೆಂಗಳೂರು.
  • ಜವಾಹಾರ್‍ಲಾಲ್ ನೆಹರೂ ಮೆಡಿಕಲ್ ಕಾಲೇಜು, ಬೆಳಗಾವಿ.
  • ಜೈನ್ ಯೂನಿವರ್ಸಿಟಿ, ಬೆಂಗಳೂರು.
  • ಮಾನಸಗಂಗೋತ್ರಿ, ಮೈಸೂರು.
  • ಬಿಎಲ್‍ಟಿಎಸ್ ಪಿಲಾನಿ, ಕರ್ನಾಟಕ.
  • ಡಿಪಾರ್ಟ್‍ಮೆಂಟ್ ಆಫ್ ಕ್ರಿಮಿನಾಲಜಿ ಆಂಡ್ ಫೋರೆನ್ಸಿಕ್ ಸೈನ್ಸ್, , ಕುವೆಂಪು ವಿವಿ ಅಥವಾ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಭಾರತ ಮತ್ತು ವಿದೇಶದಲ್ಲಿ ಕ್ರಿಮಿನಾಲಜಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಕ್ರಿಮಿನಾಲಜಿಯಲ್ಲಿ ಪದವಿ ಅಥವಾ ಡಾಕ್ಟರೇಟ್ ಪದವಿ ಪಡೆದವರನ್ನು ಕ್ರಿಮಿನಾಲಜಿಸ್ಟ್ ಎನ್ನುತ್ತಾರೆ. ಸೈಂಟಿಸ್ಟ್, ರಿಸರ್ಚ್ ಅಸಿಸ್ಟೆಂಟ್, ಕ್ರಿಮಿನಾಲಜಿಸ್ಟ್, ಫೋರೆನ್ಸಿಕ್ ಸೈಂಟಿಸ್ಟ್, ಇನ್ವೆಸ್ಟಿಗೇಟರ್ ಇತ್ಯಾದಿ ಹುದ್ದೆಗಳನ್ನು ಪಡೆಯಬಹುದು. ಸರಕಾರದ ವಿವಿಧ ಇಲಾಖೆಗಳಲ್ಲಿಯೂ ಕೆಲಸ ಪಡೆಯಬಹುದು. ಅಂದರೆ, ಫೋರೆನ್ಸಿಕ್ ಇಲಾಖೆ, ಪೊಲೀಸ್, ಸಂಶೋಧನಾ ಕ್ಷೇತ್ರ, ಮೆಡಿಕಲ್ ಆಸ್ಪತ್ರೆಗಳು, ಸಿಬಿಐ, ನ್ಯಾಯಾಲಯ, ಕ್ರೈಮ್ ಲ್ಯಾಬೋರೇಟರಿಗಳು, ಕಾಲೇಜುಗಳು ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಬಹುದಾಗಿದೆ.

ಈ ಮುಂದಿನ ಹುದ್ದೆಗಳನ್ನು ಪಡೆಯಬಹುದು

ಪತ್ತೆದಾರರು, ಕ್ರೈಮ್ ಸೀನ್ ಅನಾಲಿಸ್ಟ್, ಕ್ರೈಮ್ ಲ್ಯಾಬೋರೇಟರಿ ಅನಾಲಿಸ್ಟ್, ಎಫ್‍ಬಿಐ ಏಜೆಂಟ್, ಫೋರೆನ್ಸಿಕ್ ಸರ್ಜನ್, ಫೋರೆನ್ಸಿಕ್ ಎಂಜಿನಿಯರ್,  ಪೆÇಲೀಸ್ ಆಫೀಸರ್, ಕ್ರೈಮ್ ಇಂಟಲಿಜೆನ್ಸ್ ಅನಾಲಿಸ್ಟ್, ಕನ್ಸೂಮರ್ ಅಡ್ವೋಕೇಟ್, ಡ್ರಗ್ ಪಾಲಿಸಿ ಅಡ್ವೈಸರ್, ಎನ್ವಾಯರ್ನ್‍ಮೆಂಟಲ್ ಪ್ರೊಟೆಕ್ಷನ್ ಅನಾಲಿಸ್ಟ್ ಇತ್ಯಾದಿ. ಈ ವಿಭಾಗದಲ್ಲಿ ಉದ್ಯೋಗ ಪಡೆಯಲು ವಿಶ್ಲೇಷಣಾತ್ಮಕ ಕೌಶಲ, ಅಪರಾಧ ಸ್ಥಳದಲ್ಲಿ ಪತ್ತೆಹಚ್ಚಬೇಕಾದ ಮಾಹಿತಿಗಳ ಅರಿವು, ಅಪರಾಧ ತಂತ್ರಗಳ ಕುರಿತು ಜ್ಞಾನ, ಅಪರಾಧಿಗಳ ವರ್ತನೆಯ ಕುರಿತು ತಿಳಿವಳಿಕೆ ಮತ್ತು ಸಂಶೋಧನಾ ಕೌಶಲ ಹೊಂದಿರಬೇಕು.

ಎಸ್‌ ಎಸ್‌ ಎಲ್‌ ಸಿ/ ಪಿಯುಸಿ ಬಳಿಕ ಮುಂದೇನು? ಕರ್ನಾಟಕ ಬೆಸ್ಟ್‌ ಗೈಡ್‌ ಓದಿ

Leave a Reply

Your email address will not be published. Required fields are marked *