ಕವಿತೆ: ಬಂದು ಬಿಡು ನೀನೊಮ್ಮೆ!

ಬಂದು ಬಿಡು ನೀನೊಮ್ಮೆ

ನಾ ಕರೆಯುವ ಮೊದಲೇ

ಒಲವ ಸೆಲೆ ಬತ್ತುವುದರೊಳಗೆ

***

ಬಂದು ಬಿಡು ನೀನೊಮ್ಮೆ

ನೆನಪುಗಳು ಕರಗುವ ಮೊದಲೇ

ಕನಸುಗಳು ಕಮರುವುದರೊಳಗೆ

***

ಬಂದು ಬಿಡು ನೀನೊಮ್ಮೆ

ಮಾತು ಸಾಯುವ ಮೊದಲೇ

ಮೌನ ಅಪ್ಪಿಕೊಳ್ಳುವುದರೊಳಗೆ

***

ಬಂದು ಬಿಡು ನೀನೊಮ್ಮೆ

ನಗು ಮಾಸುವ ಮೊದಲೇ

ಅಳು ಕಾಡುವುದರೊಳಗೆ

***

ಬಂದು ಬಿಡು ನೀನೊಮ್ಮೆ

ಉಸಿರು ನಿಲ್ಲುವ ಮೊದಲೇ

ದೇಹ ಮಣ್ಣಾಗುವುದರೊಳಗೆ

error: Content is protected !!