ಕಿರು ಚಿತ್ರ; ‘ಪ್ರಕೃತಿ ಮತ್ತು ಮನುಷ್ಯ’

ಎಲ್ಲವನ್ನು ಪ್ರಕೃತಿಯಿಂದ ಪಡೆದುಕೊಂಡ ಮನುಷ್ಯ ಕೊನೆಗೆ ಅದೇ ಪ್ರಕೃತಿಯನ್ನು ನಾಶದ ಅಂಚಿಗೆ ಕೊಂಡೊಯ್ಯುತ್ತಾನೆ. ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಅರಿತುಕೊಂಡರೆ ಮುಂದಿನ ಜನಾಂಗಕ್ಕೂ ನಾವು ಮಾದರಿಯಾಗುತ್ತೇವೆ. ಲಾಕ್ ಡಾನ್ ಸಮಯದಲ್ಲಿ ಸುಮ್ಮನೇ ವನವಿಹಾರಕ್ಕೆಂದು ತೆರಳಿದ ಸ್ನೇಹಿತರ ಬಳಗವೊಂದು ಅಲ್ಲಿದ್ದ  ಕಸ ನೋಡಿ ‘ಪ್ರಕೃತಿ ಮತ್ತು ಮನುಷ್ಯ’ ಎಂಬ ಒಂದೊಳ್ಳೆಯ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.

ಪ್ರಕೃತಿಯ ಜತೆಗೆ ಮನುಷ್ಯ ಹೇಗೆ ಇದ್ದಾನೆ ಅವನು ಹೇಗೆ ಇರಬೇಕಿತ್ತು ಎಂದು ತೋರಿಸುವ ಒಂದು ಸಣ್ಣ ಪ್ರಯತ್ನ ಈ ಕಿರುಚಿತ್ರದಲ್ಲಿದೆ.

ಸೋನು ಪ್ರಕಾಶ್ ಹೆಬ್ರಿ ಇದರ ನಿರ್ದೇಶನ ಮಾಡಿದ್ದಾರೆ. ಹಿನ್ನಲೆ ಧ್ವನಿ ನಮ್ರತಾ ಹೆಗ್ಡೆ. ಹಾಗೇ ಸಚಿನ್, ಸಂದೇಶ್, ಸಚಿನ್ ಅಡಲ್ ಬೆಟ್ಟು ತಂಡದವರ ಸಹಕಾರದೊಂದಿಗೆ ಒಂದೊಳ್ಳೆಯ ಕಿರುಚಿತ್ರ ಮೂಡಿ ಬಂದಿದೆ.

error: Content is protected !!