ಪಿ.ಯು.ಬೋರ್ಡ್ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಜು.20 ರಂದು ( ಮಂಗಳವಾರ) ಪ್ರಕಟಿಸಲಿದೆ.
ಕೋವಿಡ್ ಸೋಂಕು ಪ್ರಕರಣದಿಂದಾಗಿ 2020-21 ನೇ ಸಾಲಿನ ದ್ವಿತೀಯ ಪರೀಕ್ಷೆ ರದ್ದು ಗೊಳಿಸಿರುವ ಇಲಾಖೆ , ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕ ಹಾಗೂ ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಫಲಿತಾಂಶ ಪ್ರಕಟಿಸಲಿದೆ.
2020-21 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟಿಸುವ ಸಲುವಾಗಿ ಇಲಾಖೆಯು ನೋಂದಣಿ ಸಂಖ್ಯೆಗಳನ್ನು ಶುಕ್ರವಾರ ಪ್ರಕಟಿಸಿದೆ.
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು https://dpue-exam.karnataka.gov.in/iipu2021 registrationnumber/regnumber ಈ ಲಿಂಕ್ ಮೂಲಕ ಪಡೆಯಬಹುದು.
ವಿದ್ಯಾರ್ಥಿಯು ವ್ಯಾಸಂಗ ಮಾಡಿದ ಜಿಲ್ಲೆ, ಕಾಲೇಜು ಆಯ್ಕೆ ಮಾಡಿಕೊಂಡಾಗ ವಿದ್ಯಾರ್ಥಿ ತನ್ನ ಹೆಸರು, ತಂದೆ ಹೆಸರು, ವಿದ್ಯಾರ್ಥಿ ಸಂಖ್ಯೆ, ನೋಂದಣಿ ಸಂಖ್ಯೆ, ವಿವಿಧ ಮಾಹಿತಿ ದೊರೆಯಲಿದೆ.
ನೋಂದಣಿ ಸಂಖ್ಯೆ ಬಳಸಿಕೊಂಡು ಫಲಿತಾಂಶವನ್ನು ಪ್ರಕಟಿಸಿದ ನಂತರ ವಿದ್ಯಾರ್ಥಿಗಳು ವೀಕ್ಷಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.













Got a Questions?
Find us on Socials or Contact Us and we’ll get back to you as soon as possible.