ನೀವು ಸಣ್ಣ ಕಂಪನಿ, ಅಂಗಡಿ ಅಥವಾ ಇನ್ಯಾವುದೋ ಬಿಸ್ನೆಸ್ ಹೊಂದಿರಬಹುದು. ಇಲ್ಲಿ ಸಣ್ಣದ್ದು ಎನ್ನುವುದು ಸೂಚಕ ಅಷ್ಟೇ. ನಿಮ್ಮದು ಹಲವು ಲಕ್ಷ ರೂಪಾಯಿ ವ್ಯವಹಾರ ಮಾಡುವ ಕಂಪನಿಯೂ ಆಗಿರಬಹುದು. ಕೆಲವು ಲಕ್ಷ ಜೋಡಿಸಲು ಕಷ್ಟಪಡುತ್ತಿರುವ ಕಂಪನಿಯೂ ಆಗಿರಬಹುದು. ನಿಮ್ಮ ವ್ಯವಹಾರಕ್ಕೊಂದು ಸ್ವಂತ ವೆಬ್‌ಸೈಟ್ ಈ ಸಂದರ್ಭದಲ್ಲಿ ಅವಶ್ಯಕತೆ ಇದೆ. ಯಾಕೆಂದರೆ,
ಈಗಿನ ಕೋವಿಡ್-೧೯ ಸಂಕಷ್ಟದ ಸಮಯದಲ್ಲಿಯಂತೂ ಗ್ರಾಹಕರು ಆನ್‌ಲೈನ್ ಮೂಲಕವೇ ಹುಡುಕಾಟ ನಡೆಸುತ್ತಾರೆ. ನಿಮ್ಮ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯಲು ವೆಬ್ಸೈಟ್‌ನ ಅಗತ್ಯವಿರುತ್ತದೆ.
ವೆಬ್‌ಸೈಟ್ ಮೂಲಕ ನೀವು ಹೊಸ ಗ್ರಾಹಕರನ್ನು ಪಡೆಯಬಹುದು, ನಿಮ್ಮ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಳ್ಳಬಹುದು, ನೀವು ನೀಡುವ ಸೇವೆಗಳನ್ನು ವೆಬ್‌ಸೈಟ್ ಮೂಲಕ ಪ್ರಚಾರ ಮಾಡಬಹುದು. ನೀವು ಸಂಜೆ ಆರು ಗಂಟೆಗೆ ನಿಮ್ಮ ಬಿಸ್ನೆಸ್ ಅಂಗಡಿಗೆ ಬಾಗಿಲು ಹಾಕಿದರೂ ವೆಬ್‌ಸೈಟ್ ದಿನದ ೨೪ ಗಂಟೆಯೂ ತೆರೆದೇ ಇರುತ್ತದೆ.
- ಈಗ ಇಂಟರ್‌ನೆಟ್‌ನಲ್ಲಿ ಯಾವುದಾದರೂ ಸೇವೆ ಅಥವಾ ಉತ್ಪನ್ನದ ಕುರಿತು ಮಾಹಿತಿ ಪಡೆಯುವಾಗ ಆ ಬಿಸ್ನೆಸ್‌ಗೆ ಸಂಬಂಧಪಟ್ಟ ವೆಬ್ಸೈಟ್ ಇದೆಯೇ ಎಂದು ಜನರು ಹುಡುಕುತ್ತಾರೆ. ನಿಮ್ಮ ಸ್ವಂತ ವೆಬ್‌ಸೈಟ್ ನಿಮ್ಮ ವ್ಯವಹಾರದ ಕುರಿತು ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ.
- ನಿಮ್ಮ ಕಂಪನಿಯ ಇಲ್ಲಿಯವರೆಗಿನ ಸಾಧನೆಗಳನ್ನು ವೆಬ್‌ಸೈಟ್‌ನಲ್ಲಿ ಜೋಡಿಸಬಹುದು.
- ಏನಾದರೂ ಸೇವೆಯ ಅಗತ್ಯವಿದ್ದರೆ ಆನ್‌ಲೈನ್ ಹುಡುಕಿದರೆ ನಿಮ್ಮ ಮಾಹಿತಿ ಗ್ರಾಹಕರಿಗೆ ತಕ್ಷಣಕ್ಕೆ ದೊರಕುತ್ತದೆ.
- ನಿಮ್ಮ ವ್ಯವಹಾರಕ್ಕೆ ಸಂಬಂಧಪಟ್ಟ ಒಂದು ವೆಬ್‌ಸೈಟ್ ಇದ್ದರೆ ದಿನ, ತಿಂಗಳು ಕಳೆದಂತೆ ಹೊಸ ಹೊಸ ಗ್ರಾಹಕರು ನಿಮಗೆ ದೊರಕುತ್ತ ಹೋಗುತ್ತಾರೆ. ಲೀಡ್ ಜನರೇಟ್ ಮಾಡುವಲ್ಲಿ ವೆಬ್‌ಸೈಟ್‌ಗಳ ಪಾತ್ರ ಹಿರಿದಾಗಿದೆ.
- ನಿಮ್ಮ ವೆಬ್‌ಸೈಟ್‌ಗೆ ಸರಿಯಾದ ಎಸ್‌ಇಒ ಸೆಟಪ್ ಮಾಡಿದ್ದರೆ ಗೂಗಲ್ ಸರ್ಚ್ ಮೂಲಕ ಸಾಕಷ್ಟು ಆರ್ಗಾನಿಕ್ ಗ್ರಾಹಕರು ದೊರಕುತ್ತಾರೆ.
- ನಿಮ್ಮ ಕಂಪನಿಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಸಮಯ ವ್ಯರ್ಥ ಮಾಡಬೇಕಿಲ್ಲ. ವೆಬ್ ಲಿಂಕ್ ನೀಡಿದರೆ ಸಾಕು.
- ಡಿಜಿಟಲ್ ಮಾರ್ಕೆಟಿಂಗ್ ಮಾಡಲು ಸಹ ವೆಬ್‌ಸೈಟ್ ಅನ್ನು ಬಳಸಬಹುದು. ನಿಮ್ಮ ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕಿ ಫೇಸ್‌ಬುಕ್, ಟ್ವಿಟರ್ ಇತ್ಯಾದಿಗಳಲ್ಲಿ ಷೇರ್ ಮಾಡಿ ಹೆಚ್ಚಿನ ಗ್ರಾಹಕರನ್ನು ತಲುಪಬಹುದು.
- ನಿಮ್ಮ ಪ್ರತಿಸ್ಪರ್ಧಿಗಳೆಲ್ಲ ಈಗಾಗಲೇ ವೆಬ್‌ಸೈಟ್ ಹೊಂದಿದ್ದರೆ, ನಿಮ್ಮಲ್ಲಿ ವೆಬ್‌ಸೈಟ್ ಇಲ್ಲದೆ ಇದ್ದರೆ ನಿಮಗೆ ಬಿಸ್ನೆಸ್ ಕಡಿಮೆಯಾಗಬಹುದು.
ಬಿಸ್ನೆಸ್ ವೆಬ್‌ಸೈಟ್, ಇಕಾಮರ್ಸ್ ವೆಬ್‌ಸೈಟ್, ನ್ಯೂಸ್ ವೆಬ್‌ಸೈಟ್ ಇತ್ಯಾದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


















Got a Questions?
Find us on Socials or Contact Us and we’ll get back to you as soon as possible.