Category Archives: Technology

ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ ಕಾಂನಲ್ಲೇ ಪ್ಲ್ಯಾನ್ ಗಳನ್ನು ಖರೀದಿಸಬಹುದೇ?

ನೀವು ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ರಚಿಸುವಾಗಲೇ ಡೊಮೈನ್ ಖರೀದಿ ಮಾಡುವಂತೆ ಸೂಚನೆ ಬರುತ್ತದೆ. ಬ್ಲಾಗ್ ರಚಿಸಿದ ಬಳಿಕ ಅಪ್ ಗ್ರೇಡ್ ಮಾಡುವಂತೆ ಸೂಚನೆ ಬರುತ್ತದೆ. ಈ ಲೇಖನ ಓದಿದ ತಕ್ಷಣ ಯಾವುದೇ ಕಾರಣಕ್ಕೂ ವರ್ಡ್ ಪ್ರೆಸ್ ನಲ್ಲಿ ಯಾವುದಾದರೂ ಪ್ಲ್ಯಾನ್ ಖರೀದಿಸಲು ಹೋಗಬೇಡಿ. ಯಾಕೆಂದರೆ, ವರ್ಡ್ ಪ್ರೆಸ್ ಹೊರಗಡೆ ಇದಕ್ಕಿಂತಲೂ ಕಡಿಮೆ ದರಕ್ಕೆ ಉತ್ತಮ ಪ್ಲ್ಯಾನ್ ದೊರಕುತ್ತದೆ. ಈ ಕುರಿತು ನಾನು ಮುಂದೆ ಮಾಹಿತಿ ನೀಡುತ್ತೇನೆ. ಇಲ್ಲಿ ನೀಡಿದ ದರಗಳು 2019ರ ಜನವರಿ ತಿಂಗಳಲ್ಲಿ ನಮೂದಿಸಿರುವುದು. ಈ ದರ ಈಗ… Read More »

ವರ್ಡ್ ಪ್ರೆಸ್ ಬ್ಲಾಗ್: ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ?

ವರ್ಡ್ ಪ್ರೆಸ್ ವೆಬ್ ಸೈಟ್ ವಿನ್ಯಾಸ ಸಂಪೂರ್ಣ ಮಾರ್ಗದರ್ಶಿಯನ್ನು ಕನ್ನಡದಲ್ಲಿ ಒದಗಿಸುವ ಈ ಹಿಂದಿನ ಲೇಖನಗಳನ್ನು ಸಾಕಷ್ಟು ಜನರು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಚಿಕೆಯಲ್ಲಿ ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ ಮತ್ತು ಆ ಬ್ಲಾಗ್ ಗೆ ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ ಎನ್ನುವುದನ್ನು ಕಲಿಯೋಣ. ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ ಹೇಗೆ? ಮೊದಲಿಗೆ https://wordpress.com/ ಹೋಗಿ ಹೊಸ ಖಾತೆ ಆರಂಭಿಸಿ. ನಿಮ್ಮ ಬ್ಲಾಗ್ ಗೆ ಒಂದು ಹೆಸರು ನೀಡಿ. ಉದಾಹರಣೆಗೆ https://karnatakabest.wordpress.com/ ಎಂಬ ಹೆಸರಿನಲ್ಲಿ ನಿಮ್ಮ ಬ್ಲಾಗ್… Read More »

ಬ್ಲಾಗರ್ ಗೈಡ್: ಉಚಿತ ಬ್ಲಾಗ್ ರಚಿಸುವುದು ಹೇಗೆ?

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಗೈಡ್ ಮೂಲಕ ಈಗಾಗಲೇ ವರ್ಡ್ ಪ್ರೆಸ್ ಯಾಕೆ ಬೆಸ್ಟ್? ಸೇರಿದಂತೆ ಕೆಲವು ಲೇಖನ ಓದಿದ್ದೀರಿ. ಈಗ ಬ್ಲಾಗರ್ ಮೂಲಕ ಬ್ಲಾಗ್ ರಚಿಸುವ ಕಲೆಯನ್ನು ಕಲಿಯೋಣ. ಇದನ್ನು ಕಲಿತರೆ ಮುಂದೆ ವೆಬ್ ಸೈಟ್ ರಚಿಸುವುದು ನಿಮಗೆ ಸುಲಭವಾಗಲಿದೆ. ಫೇಸ್ಬುಕ್ ಇತ್ಯಾದಿಗಳ ನಂತರ ಬ್ಲಾಗರ್ ಬಳಸುವವರು ಕಡಿಮೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬ್ಲಾಗರ್ ಅನ್ನೇ ಸ್ವಂತ ವೆಬ್ ಸೈಟ್ ಆಗಿ ರೂಪಿಸಿ ಬಹುತೇಕರು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಹತ್ತು ಸಾವಿರಗಳನ್ನು ನೀಡಲು ಸಾಧ್ಯವಿಲ್ಲದೆ… Read More »

ವೆಬ್ ಸೈಟ್ ಗೈಡ್: ಯಾಕೆ ವರ್ಡ್ ಪ್ರೆಸ್ ಬೆಸ್ಟ್?

ಕರ್ನಾಟಕ ಬೆಸ್ಟ್ ವೆಬ್ ಸೈಟ್ ಮಾರ್ಗದರ್ಶಿಯ ಎರಡನೇ ಅಧ್ಯಾಯವಾಗಿ “ಯಾಕೆ ವರ್ಡ್ ಪ್ರೆಸ್ ಬೆಸ್ಟ್?’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಈಗಾಗಲೇ ಪೀಠಿಕೆಯಲ್ಲಿ ಈ ಕುರಿತು ಒಂದಿಷ್ಟು ಅಂಶಗಳು ನಿಮಗೆ ತಿಳಿದುಬಂದಿರಬಹುದು. ಜಗತ್ತಿನಲ್ಲಿರುವ ಒಟ್ಟಾರೆ ವೆಬ್ ಸೈಟ್ ಗಳಲ್ಲಿ ಸುಮಾರು ಶೇಕಡ 30ರಷ್ಟು ಈಗ ವರ್ಡ್ ಪ್ರೆಸ್ಟ್ ಮೂಲಕ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣಲಿದೆ. ಮುಂದೊಂದು ದಿನ ಸರ್ವಂ ವರ್ಡ್ ಪ್ರೆಸ್ ಮಯ ಆದರೂ ಆಗಬಹುದು. ನಿಮ್ಮ ಆಸಕ್ತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳುವ ಉದ್ದೇಶದಿಂದ… Read More »

ವೆಬ್ ಸೈಟ್ ಗೈಡ್: ಕರ್ನಾಟಕ ಬೆಸ್ಟ್ ಸಂಪೂರ್ಣ ಮಾರ್ಗದರ್ಶಿ

ಎಲ್ಲರಿಗೂ ನಮಸ್ಕಾರ. ಕರ್ನಾಟಕ ಬೆಸ್ಟ್.ಕಾಂ ಮೂಲಕ ಒಂದು ಸಂಪೂರ್ಣ ಟೆಕ್ ಪಾಠ ಹೇಳಿಕೊಡುವ ಪ್ರಯತ್ನದ ಆರಂಭವಿದು. ನಿಮಗೂ ಇದು ಇಷ್ಟವಾದೀತು ಎಂಬ ನಂಬಿಕೆ ನನ್ನದು. ವರ್ಡ್ ಪ್ರೆಸ್ ವೆಬ್ ಸೈಟ್ ಗೈಡ್ ಭಾಗ-1: ಪೀಠಿಕೆ ಜ್ಞಾನ ಇರುವುದು ಹಂಚಿಕೊಳ್ಳುವುದಕ್ಕೆ ಎಂದು ಎಲ್ಲೋ ಓದಿದ ನೆನಪು. ಈ ಮಾತನ್ನೇ ಸ್ಫೂರ್ತಿಯಾಗಿಟ್ಟುಕೊಂಡು ವರ್ಡ್ ಪ್ರೆಸ್ ಗೈಡ್ ಎಂಬ ಶೀರ್ಷಿಕೆಯಡಿಯಲ್ಲಿ ನನಗೆ ಗೊತ್ತಿರುವ ವೆಬ್ ಸೈಟ್ ಟಿಪ್ಸ್ ಮತ್ತು ಟ್ರಿಕ್ಸ್ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಮೂಲಕ ನೀವೂ ಇತರರ ನೆರವು ಇಲ್ಲದೆ ಸ್ವಂತವಾಗಿ ವರ್ಡ್… Read More »

Think Smart: ಸ್ಮಾರ್ಟ್ ಮನೆ, ಸ್ಮಾರ್ಟ್ ಮನಸ್ಸು

ಉದ್ಯಾನನಗರಿ ಬೆಂಗಳೂರಿನಲ್ಲೀಗ ಚಳಿಯ ಸಮಯ. ಮುಂಜಾನೆಯಂತೂ ಬೆಚ್ಚಗಿನ ರಗ್ಗು ಹೊದ್ದು ಹಾಯಾಗಿ ಮಲಗಿದರಂತೂ ಸ್ವರ್ಗಸುಖ. ಹೊರಗೆ ಚಳಿ, ಮನಸ್ಸೊಳಗೆ ಹಿತವಾದ ಕನಸು. ಇನ್ನಷ್ಟು ಹೊತ್ತು ಮಲಗಬೇಕು ಎಂದೆನಿಸುವಷ್ಟರಲ್ಲಿ ಸದ್ದು ಮಾಡಿದ್ದು alarm. ನಿದ್ದೆ ಮಾಡಲು ಬಿಡುತ್ತಿಲ್ಲ ಎಂದುಕೊಂಡೆ. ಕೊಂಚ ದೂರದಲ್ಲಿಟ್ಟಿರುವುದರಿಂದ ಎದ್ದೇಳುವುದು ಅನಿವಾರ್ಯ. ಬೆಳಗ್ಗೆದ್ದು ವಾಕಿಂಗ್ ಹೋಗುವುದು ಇತ್ತೀಚಿನ ಅಭ್ಯಾಸ. ಭವಿಷ್ಯದಲ್ಲಿ ಹೊಟ್ಟೆ ಮುಂದೆ ಬಾರದೆ ಇರಲಿ ಎಂದು ವಾಕಿಂಗ್ ಹೋಗುವುದು ಮುಖ್ಯ ಕಾರಣ. ಜೊತೆಗೆ, ದಿನವೀಡಿ ಏಸಿ ರೂಂನಲ್ಲಿ ಕೆಲಸ ಮಾಡುವುದರಿಂದ ದೇಹಕ್ಕೆ ದೈಹಿಕ ವ್ಯಾಯಾಮವೇ ಇಲ್ಲ. ಹೀಗಾಗಿ ಪ್ರತಿನಿತ್ಯ… Read More »