SSLC, PUC ಅಂಕಪಟ್ಟಿ ದೃಢೀಕರಣಕ್ಕೆ ಇಲಾಖೆ ಆದೇಶ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರಥಮ ಪಿಯುಸಿ ಅಂಕ ಹಾಗೂ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳನ್ನು ಪರಿಶೀಲಿಸಿ ದೃಢೀಕರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಸೂಚಿಸಿದೆ.

ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಎಟಿಎಸ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಪಿಯುಸಿ ಅಂಕಪಟ್ಟಿಯು ಕಾಲೇಜಿನಲ್ಲಿ ಲಭ್ಯವಿದೆ. 2019 ನೇ ಸಾಲಿನ 10 ನೇ ತರಗತಿ ಅಂಕಪಟ್ಟಿ ಹಾಗೂ 2020 ನೇ ಸಾಲಿನ ಪ್ರಥಮ ಪಿಯುಸಿ ಅಂಕಪಟ್ಟಿಯನ್ನು ತಾಳೆ ನೋಡಿ, ಈ ಎರಡೂ ದಾಖಲೆಗಳು ಸರಿ ಇದೆಯೇ ಎಂಬುದನ್ನು ಜೂನ್ 12 ರಿಂದ ಜೂನ್ 16 ರವರೆಗೆ ಪರಿಶೀಲಿಸಿ‌ ದೃಢೀಕರಿಸಬೇಕು. ಯಾವುದೇ ತಾಂತ್ರಿಕ ಸಮಸ್ಯೆ ಗೆ ಇಲಾಖೆ ನೇಮಿಸಿರುವ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಾಲೇಜು ಹಂತದಲ್ಲಿ ಪ್ರಕ್ರಿಯೆ ಮುಗಿದ ನಂತರ ಕೇಂದ್ರ ಕಚೇರಿಯಲ್ಲಿ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

error: Content is protected !!