ಅನಿಮೇಷನ್ ಕಲಿಕೆಗೆ ಬಾಲ್ಕ್ ಬೆಂಗಳೂರು ಬೆಸ್ಟ್

ಕರ್ನಾಟಕ ಬೆಸ್ಟ್‌ ಶಿಫಾರಸು

ಈಗ ಇಂಟರ್‌ನೆಟ್‌ ಅತ್ಯಂತ ಪ್ರವರ್ಧಮಾನದಲ್ಲಿರುವುದರಿಂದ ವಿಡಿಯೋ ಗೇಮ್‌, ಸೋಷಿಯಲ್‌ ಮೀಡಿಯಾ ಗೇಮ್‌, ವಿಡಿಯೋ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ಷೇತ್ರದ ವಿಶಾಲ ವ್ಯಾಪ್ತಿ ಮತ್ತು ಕರಿಯರ್‌ ಅವಕಾಶಗಳನ್ನು ಮನಗಂಡು ಈಗಿನ ದಿನಗಳಲ್ಲಿ ಬಹುತೇಕರು ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಯಲು ಆಸಕ್ತಿವಹಿಸುತ್ತಿದ್ದಾರೆ. ಅನಿಮೇಷನ್‌ ವೃತ್ತಿಪರರಿಗೆ ಇರುವ ಅತ್ಯುತ್ತಮ ವೇತನ, ಕರಿಯರ್‌ನಲ್ಲಿ ಪ್ರಗತಿ ಕಾಣುವ ಅವಕಾಶಗಳನ್ನು ಮನಗಂಡು ೨ಡಿ, ೩ಡಿ ಅನಿಮೇಷನ್‌ ಸೇರಿದಂತೆ ವಿವಿಧ ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ.

ಒಂದು ನಿರ್ಜೀವ ವಸ್ತುವಿಗೆ ಆಕಾರ ಮತ್ತು ಜೀವ ನೀಡುವ ಮಹೋನ್ನತ ಕಲೆಯನ್ನು ಅನಿಮೇಷನ್‌ ಎನ್ನಬಹುದು. ಮನರಂಜನೆ ಉದ್ಯಮ ಮತ್ತು ತಂತ್ರಜ್ಞಾನದ ಯುಗಳಗೀತೆಯಾಗಿ ಅನಿಮೇಷನ್‌ ಉದ್ಯಮವು ಕಾರ್ಯನಿರ್ವಹಿಸುತ್ತಿದೆ. ವಿನ್ಯಾಸ, ಚಿತ್ರ ರಚನೆ, ವಿನ್ಯಾಸ ಮತ್ತು ಪ್ರೊಡಕ್ಷನ್‌ ಇತ್ಯಾದಿ ವಿಭಾಗಗಳನ್ನು ಬಳಸಿಕೊಂಡು ಗ್ರಾಫಿಕ್‌ ಶ್ರೀಮಂತವಾದ ಮಲ್ಟಿಮೀಡಿಯಾ ಕ್ಲಿಪ್‌ಗಳನ್ನು ರಚಿಸಲಾಗುತ್ತದೆ.

Photo by D A V I D S O N L U N A on Unsplash

ಪಡೆಯಬಹುದಾದ ಹುದ್ದೆಗಳು: ೨ಡಿ ಅನಿಮೇಟರ್‌, ೩ಡಿ ಅನಿಮೇಟರ್‌, ಕೀ ಫ್ರೇಮ್‌ ಅನಿಮೇಟರ್‌, ಇಮೇಜ್‌ ಎಡಿಟರ್‌, ಮಾಡೆಲ್ಲರ್‌, ಕ್ಯಾರೇಕ್ಟರ್‌ ಅನಿಮೇಟರ್‌, ಟೆಕ್ಸಚರ್‌ ಆರ್ಟಿಸ್ಟ್‌, ಲೇಔಟ್‌ ಆರ್ಟಿಸ್ಟ್‌, ಲೈಟಿಂಗ್‌ ಆರ್ಟಿಸ್ಟ್‌, ಸ್ಟೋರಿ ಬೋರ್ಡ್‌ ಆರ್ಟಿಸ್ಟ್‌, ಬ್ಯಾಕ್‌ಗ್ರೌಂಡ್‌ ಆರ್ಟಿಸ್ಟ್‌, ಕ್ಲೀನ್‌ಅಪ್‌ ಆರ್ಟಿಸ್ಟ್‌, ರಿಗ್ಗಿಂಗ್‌ ಆರ್ಟಿಸ್ಟ್‌, ರೆಂಡರಿಂಗ್‌ ಆರ್ಟಿಸ್ಟ್‌,ಡಿಜಿಟಲ್‌ ಇಂಕ್‌ ಮತ್ತು ಪೇಂಟ್‌ ಆರ್ಟಿಸ್ಟ್‌.

ಎಲ್ಲಿ ಓದಬಹುದು?

ದೇಶದಲ್ಲಿ ಹತ್ತು ಹಲವು ಸಂಸ್ಥೆಗಳು ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಸುತ್ತವೆ. ಅವುಗಳಲ್ಲಿ ಕರ್ನಾಟಕ ಬೆಸ್ಟ್‌ ಶಿಫಾರಸು ಮಾಡುವ ಕೆಲವೇ ಸಂಸ್ಥೆಗಳಲ್ಲಿ ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಬಾಲ್ಕ್‌ ಅಕಾಡೆಮಿಯನ್ನು. ಈ ಸಂಸ್ಥೆಯ ಕುರಿತು ಹೆಚ್ಚಿನ ವಿವರ ಪಡೆಯಲು ಬಾಲ್ಕ್ ಬೆಂಗಳೂರು ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

copyright- google images

ಯಾರು ಕಲಿಯಬಹುದು?

ಎಸ್‌ಎಸ್‌ಎಲ್‌ಸಿ/ಪಿಯುಸಿ ಬಳಿಕ (ಫೇಲ್‌ ಆದವರೂ ಕೂಡ) ಅನಿಮೇಷನ್‌ಗೆ ಸಂಬಂಧಪಟ್ಟ ಡಿಪ್ಲೊಮಾ ಅಥವಾ ಪದವಿ ಕೋರ್ಸ್‌ಗಳನ್ನು ಮಾಡಬಹುದು. ಅನಿಮೇಷನ್‌ಗೆ ಸಂಬಂಧಪಟ್ಟ ಟೆಕ್ನಿಕಲ್‌ ಕೋರ್ಸ್‌ಗಳನ್ನು ಮಾಹಿತಿ ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನ ಬಾಲ್ಕ್ ಶಿಕ್ಷಣ ಸಂಸ್ಥೆಯಿಂದ ಪಡೆದುಕೊಳ್ಳಬಹುದು.

ಗಮನಿಸಿ: ಕರ್ನಾಟಕ ಬೆಸ್ಟ್‌ ಓದುಗರಿಗೆ ಬಾಲ್ಕ್‌ನ ಆಯ್ದ ಕೋರ್ಸ್‌ಗಳಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಬಾಲ್ಕ್‌ ಅಕಾಡೆಮಿಯನ್ನು ಸಂಪರ್ಕಿಸಬಹುದು.  

error: Content is protected !!